Monday, 23 January 2012

ಮೂಡಣ ಸೂರ್ಯ

ಮೂಡುವ ಸೂರ್ಯನಿಗೆ ಜಗತ್ತನ್ನು ನೋಡುವ ತವಕ,
ತನ್ನ ನೋಡಲು ಕಾಯುವವರಿಗೆ ಮಾಡುವನು ಕಿರಣಗಳ ಎರಕ,
ಇವನೆಂದರೆ ಸಾಕು, ಎಲ್ಲರೂ ಸುರಿಸುವರು ಪ್ರೇಮದ ಪುಳಕ,
ಅವನು ಮುನಿದರೆ,ಹರಿಯುವುದು ಜಗದ್ ತುಂಬಾ ಶಾಖ ಶಾಖ,
ನಡುಗುವ ಚಳಿಯಲಿ,ಮಾಡುವುದು ಜಗ ಇವನ ಜಪ ತಪ,
ಮೋಡಗಳ ಮರೆಯಲ್ಲಿನ ಕಣ್ಣ ಮುಚ್ಚಾಲೆ ಅವನದು,
ಬೇಸಿಗೆಯಲ್ಲಿ ನಿಂದಿಸುವರ,ಪ್ರೀತಿಸುವರ ಪಕ್ಷಪಾತವಿಲ್ಲದ ಪ್ರೀತಿ ಅವನದು,
ಕಾಡುವುದು ಅವನ ನೆನಪು,ಅವನಿಲ್ಲದ ಹೊತ್ತು.
ಪ್ರತಿ ದಿನವೂ ಬರುವನು,ಹೋಗುವನು ಉಲ್ಲಾಸದಿಂದ,
ಜಗವೆಲ್ಲ ನಮಿಸುವುದು,ಬೀಳ್ಕೊಡುವುದು ಉತ್ಸಾಹದಿಂದ...!!!!!

No comments:

Post a Comment