Tuesday, 12 November 2013

Use Quillpad to type in Indian languages on Facebook, Twitter, Blogs, Email etc..

Use Quillpad to type in Indian languages on Facebook, Twitter, Blogs, Email etc..

ಹೇಳದೆ,ಕೇಳದೆ ಹುಟ್ಟಿದ ಪ್ರೀತಿ
ಇಂದು ನನ್ನನೇ ಆಳುತ್ತಿದೆ...!!!!
-ಬಳ್ಳಾ

Monday, 11 November 2013

Use Quillpad to type in Indian languages on Facebook, Twitter, Blogs, Email etc..

Use Quillpad to type in Indian languages onದಾರಿಯುದ್ದಕ್ಕೂ...ನಿನ್ನ ನೆರಳಿತ್ತು
ನೀ ವರ್ಷಕ್ಕೆ ಮೂಲವಾಗಿದ್ದೆ
ಸುಡುಬಿಸಿಲಿಗೆ ನಿನ್ನ ನೆರಳು ಸವಾಲು ಎಸೆಯುತ್ತಿತ್ತು.
ತಂಗಾಳಿಗೆ ಜೊತೆಯಾಗಿದ್ದೆ.
ಚಿಲಿಪಿಲಿಗಳ ಕಲರವ ನಿನ್ನ ಮಡಿಲ ತುಂಬಿತ್ತು.
ತನ್ನ ದುರಾಸೆಗೆ ನಿನ್ನ ಬಲಿಕೊಟ್ಟ ಮನುಜ
ಅನುಭವಿಸುತ್ತಿರುವ....ಇಂದು
ಅತಿವೃಷ್ಟಿಗಳ ಅಬ್ಬರವ,
ಸುನಾಮಿ,ಹಯಾನ್ಗಳ  ಅಪ್ಪಳಿಕೆಗಳ...!
ನೀ ಕಯ್ಯಾರೆ ಸೃಷ್ಟಿಸಿದ ಸೃಷ್ಟಿಗೆ
ನೀ ಬುದ್ದಿ ಹೇಳುತ್ತಿರುವ ಪರಿಯಿದಾ..?
ಮೂಡ,ಅಂಧ,ಮನುಜ ಕಲಿಯಲಾರ
ಅವನ ಕಪಿಚೇಷ್ಟೆಗೆ, ನಿನ್ನ ಶಿಕ್ಷೆಗೆ
ಬಲಿಯಾಗುವರು ಅಮಾಯಕರು..!
ಕೊನೆಗೆ ನಾನಾ,ನೀನಾ ಅನ್ನೋ ಮಟ್ಟಕ್ಕೆ ನಿಮ್ಮ ಇರಿಸು ಮುರಿಸು.
ಸೃಷ್ಟಿಸಿದ ತಾಯಿ ನೀನು..ಸಾಲುಮರದ ತಿಮ್ಮಕ್ಕನಂತಹರನ್ನೂ..!
ಅಂತಹ ಮಹಾತಾಯಿಯರು ಕಾಪಾಡುತಿಹರು
ಈ ಲೋಕವನ್ನ...
ಅಂಗಳದಲ್ಲಿ ಆಡುವ ಕಂದನಿಗಿಲ್ಲ
ಸವಿ ನಾಳೆಗಳು....!
-ಬಳ್ಳಾ
 Facebook, Twitter, Blogs, Email etc..

Monday, 1 July 2013

ಬರುವೆನಂದರೂ ಬರಲಿ ಬಿಡು..!

ಬರುವೆನಂದರೂ ಬರಲಿ ಬಿಡು..!



ಚಂದ್ರನ ಜೊತೆಗೆ,ತಾರೆಯ ಬೆಳಕು ಕೂಡ ಬರುವೆನಂದರೂ ಬರಲಿ ಬಿಡು..!ಮಂಜಿನ ಜೊತೆಗೆ,ತಂಗಾಳಿಯ ಸವಿ ಕೂಡಬರುವೆನಂದರೂ ಬರಲಿ ಬಿಡು..!ನಿನ್ನ ಪ್ರೀತಿಯ ಜೊತೆಗೆ,ನಿನ್ನೊಲವು ಕೂಡಬರುವೆನಂದರೂ ಬರಲಿ ಬಿಡು..!ಬಾಡದ ಹೂ ಬಾಡಿತು ಹೇಗೋ?ನನ್ನಿಂದ ನೀ ಜಾರಿ ಹೋದೆ ಹೇಗೆ ತಿಳಿಯೆ...!

-ಬಳ್ಳಾ


Monday, 11 March 2013

ನೀ ಒಳಗಿರಲು
ಬೀಸಿದೆ ಹೃದಯ ಮೈದಾನದಲಿ ತಂಗಾಳಿ,
ಮನಸಾ ಬೀದಿಲಿ ಹರಿದಿದೆ,ಹರುಷದ ಹೊನಲು.
ಕನಸಾ ಕೋಟೆಯಾ ತುಂಬಾ ಕನಸಿನ ಝುಳು ಝುಳು
-ಬಳ್ಳಾ

Sunday, 10 March 2013

ನನ್ನ ನಿನ್ನ ಜೀವನ ಪುಟದಲ್ಲಿ ಲೆಕ್ಕಾನೇ ಇಲ್ಲದಷ್ಟು ನೆನಪು ಇದೆ.
ಜೀವನದ ಪ್ರತಿ ತಿರುವಲ್ಲೂ,ನಿನ್ನ ನೆನಪೇ ಕೇಕೆ ಹಾಕಿ ನಗ್ತಾ ಇದೆ.
ನೋವಿನ ಪ್ರತಿ ಹೆಜ್ಜೆಲೂ, ನೀಡಿದ್ದ ಸಾಂತ್ವನ ತಲೇಲಿ ಗಿರ್ಕಿ ಹೊಡೀತಿದೆ.
ತಂಗಾಳಿ ಬೀಸಿದಾಗೆಲ್ಲ...ನೀ ಸೋಕಿದ್ದ ನೆನಪಾಗಿ,ಮನ ಮುದುಡಿ ಹೋಗಿದೆ.
ಹಗಲು ಎನ್ನದೆ,ಇರುಳು ಎನ್ನದೆ..ಬರೀ ನಿನ್ನ ನೆನಪು ಬರಿಸಿ,ಗಡಿಯಾರ ನಾಚಿಸಿದೆ.