Thursday, 15 March 2012

ಆದ್ರೆ..... ನೀ ಜೊತೆಗಿಲ್ಲ ಇಂದು..!

ನಿನ್ನ ಮನಸ ಮೂಲೆಯಲ್ಲಿ ಇನ್ನೂ ನಾನು ಇರಬಹುದಾ.?
ಕಣ್ಣ ಒಳನೋಟದಲ್ಲೂ ಸಹ ಇನ್ನೂ ನಾನು ಇರಬಹುದಾ..?
ಆಗಾಗ ಬೀಳೊ ಕನಸಲ್ಲೂ ನಾನು ಇರಬಹುದಾ.?.
ಓರೆ ನೋಟ ಬೀರೋ ಕಣ್ಣಿಗೂ ಸಹ ನಾ,ಕಾಣಿಸಬಹುದಾ.?
ನಿನ್ನ ಅಂತರಾಳದ ಒಳಗೆ ಎಲ್ಲೋ ಒಂದು ಕಡೆ ನಾ ಇರಬಹುದಾ?
ಹೋಗ್ಲಿ...ಕೊನೆಗೆ, ನಿನ್ನ ಗುಂಡಿಗೆಯ ಮಿಡಿತಕ್ಕಾದರೂ..ನನ್ನ ನೆನಪು ಇರಬಹುದಾ.?
ಇವೆಲ್ಲಾ ಪ್ರಶ್ನೆಗಳಿಗೆ ನಿನ್ನುತ್ತರ ಇಲ್ಲ ಅನ್ನುವುದಾದರೆ.???ಹುಸಿ ನುಡಿಯಬೇಡ,ಗೆಳತಿ...!
ನಾವು ಒಟ್ಟಾಗಿ ಸುತ್ತಾಡಿ,ಪ್ರೀತಿಸಿದ್ದಕ್ಕೆ,ನಿಮ್ಮನೆ ಬೀದಿ ನಾಯಿ,ಮೇಲ್ಮನೆ ಪಾರ್ಕಿನ ಬೆಂಚು,
ಅಲ್ಲಿನ ಗಿಡ,ಮರ,ಅವುಗಳ ನೆರಳು.ಸುಯ್ಯನೆ ಬೀಸುತ್ತಿದ್ದ ತಂಗಾಳಿ,ಭೋರ್ಗರೆದು ಸುರಿಯುತ್ತಿದ್ದ ಮಳೆ,
ಪಾನಿ ಪೂರಿ ಹುಡ್ಗ.ಐಸ್ ಕ್ರೀಮ್ ಪಾರ್ಲರ್,ಇವರೆಲ್ಲರೂ ಸಾಕ್ಷಿ ಇದ್ದಾರೆ...!!!!
ಇವತ್ತು ಅವ್ರೆಲ್ಲರೂ ಇದ್ದಾರೆ...ಸುರಿಯುವ ಮಳೆಯೂ..ಬಂದಿದೆ..ಆದ್ರೆ ನೀ ಜೊತೆಗಿಲ್ಲ ಇಂದು..!!!
ನಿರೀಕ್ಷೆಯಲ್ಲಿ
ನಿನ್ನವನೆಂದಿಗೂ.!!!!