ಮತ್ತೆ ಮತ್ತೆ ಮರುಕಳಿಸುವ ನಿನ್ನ ನೆನಪುಗಳು
ಮನಸಲ್ಲಿ ಅವುಗಳು ಏಳಿಸುವ ಅಲೆಗಳು
ಆ ಅಲೆಗಳು ಕಣ್ಣೊಳಗಿಂದ ಹೊರಚೆಲ್ಲೋ ಕಣ್ಣೀರ ಹನಿಗಳು
ಎಷ್ಟು ಹೇಳಿದರೂ...ಮಾತು ಕೇಳದೇ,ಮತ್ತೆ ಮತ್ತೆ ನಿನ್ನ ನೆನಪಿಸಿಕೊಳ್ಳೋ ಮನಸಾ ತುಮುಲಗಳು
ಲೋಕದ ಜಂಜಾಟದಲ್ಲಿ,ಮುಳುಗಿ ಸುಸ್ತಾಗಿ ಬಿದ್ದಾಗ,
ನನ್ನ ಹೆಗಲ ನೇವರಿಸುತ,ಲಾಲಿ ಹಾಡುವ ನಿನ್ನ ಸವಿ ರಾಗಗಳು..!
ಕನಸಲ್ಲಿ ಬೆಚ್ಚಿಬಿದ್ದು,ಬಿಕ್ಕಳಿಸುತ ನೀರಿಗಾಗಿ ತಡಕಡುವಾಗ...ಸಿಕ್ಕ ನೀರಿನ ಗುಟುಕಗಳು.
ಇವುಗಳೆಲ್ಲ ಬೇಕು...ನಿನ್ನೂಂದಿಗೆ..!!!!!!
-ನಿನ್ನವ
No comments:
Post a Comment